ಉತ್ತರ ಕರ್ನಾಟಕದಲ್ಲಿರುವ ವಿಜಯನಗರ

Jan 02, 2022 05:06 am By admin

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ . ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ – ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ. ಪ್ರಸ್ತುತ ಇದು ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಬಂಡೆ ಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು. ಮೊಗಲರಿಂದ ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.